Mein Weg vom Studium zu VLSI

Nach der Schule, habe ich Naturwissenschaften und dann Elektrotechnik Maschinenbau studiert. Und dann habe ich bei ITI gearbeitet. Danach arbeitete ich bei Mindtree und später bei Centillium und Transwitch. Darüber hinaus, habe ich in Electronics promoviert. Später habe ich mein eigenes Unternehmen mitgegründet. Jetzt arbeite ich bei Synopsys, wo ich Kurse entwerfe und Menschen in VLSI ausbilde.

Meine erster Deutscher Blog

Das letzte Jahr war echt spannend. Es ist viel passiert. Ich habe ein tausend Personen in VLSI unterrichtet. Letzte Jahr, habe ich zwei Bucher geschrieben. Das war natürlich stressig. In Juni, habe ich nach Mumbai gereist. Dort, habe ich Filmaufnahmen gesehen. Das was wirklich aufregend.

In Dezember, kommt meine Cousine aus den USA um uns zu besuchen. Wir hatten viel Spaß zusammen.

ತಂತ್ರಾಂಶದಿಂದ ವ್ಯಾಖ್ಯಾನಿಸಬಹುದಾದ ಚಿಪ್ಪಿನಲ್ಲಿನ ವ್ಯವಸ್ಥ್ಯೆ (Software Defined System on chip)


ಸುಮಾರು ಹಲವೇ ದಶಕಗಳಿಂದ ನಾವು ಚಿಪ್ಪಿನಲ್ಲಿನ ವ್ಯವಸ್ಥ್ಯೆಗಳ (System on Chips) ಬಗ್ಗೆ ಕೇಳಿದ್ದೇವೆ, ಉಪಯೋಗಿಸಿದ್ದೇವೆ ಮತ್ತು ನಮ್ಮಂತ ಕೆಲವರು ಅವುಗಳನ್ನು ರಚಿಸಿದ್ದೇವೆ. ಅವುಗಳ ಸಾಮರ್ಥ್ಯ (capabilities) ಮತ್ತು ಅನುಕೂಲಗಳು (advantages) ನಮೆಗೆಲ್ಲ ತಿಳಿದೇ ಇದೆ. ಒಂದರ ಮೇಲೊಂದು ಬಳಕೆಗೆ ಬರುತ್ತಿರುವ ಎಲ್ಲಾ ಸಾಧನಗಳು ಎಲೆಕ್ಟ್ರಾನಿಕ್ಸ್ ಸಾಧನಗಳು ಮುಖ್ಯವಾಗಿ ಚಿಪ್ಪಿನಲ್ಲಿರುವ ವ್ಯವಸ್ಥ್ಯೆಗಳನ್ನೇ ಬಳಸುತ್ತವೆ. ಆದ್ದರಿಂದ, ಇವುಗಳು ಬಳಕಾ ಸ್ಥಿತಿಯ (application scenarios) ಎಲ್ಲ ಕಾರ್ಯಗಳನ್ನು ಸಶಕ್ತವಾಗಿ ನಿರ್ವಹಿಸಬೇಕಾಗುತ್ತದೆ. ಇದು ಇಂದಿನ ಅಂಚಿನ ಸಾಧನ (Edge devices) ಗಳು ಕ್ಲೌಡ್ ಕಂಪ್ಯೂಟಿಂಗ್ ವ್ಯವಸ್ಥ್ಯೆ (cloud computing SOCs) ಗಳಿಗೂ ಅನ್ವಹಿಸುತ್ತದೆ.
ಕ್ಲೌಡ್ ಕಂಪ್ಯೂಟಿಂಗ್ ವ್ಯವಸ್ಥ್ಯೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅವುಗಳ ನಮ್ಯತೆ (flexibility) ಯ ಪ್ರಾಮುಖ್ಯತೆಯ ಅರಿವಾಗುತ್ತದೆ. ಬಹುತೇಕ ಅಪ್ಲಿಕೇಶನ್ಸ (applications) ಮತ್ತು ಸೇವೇ (services) ಗಳು ಕ್ಲೌಡ್ ಸರ್ವರ್ (cloud server) ನ ಮಿತಿರಹಿತ ಲೆಕ್ಕಾಚಾರ (limitless computing) ದ ಅನುಕೂಲತೆಯನ್ನು ಮೇಲೆ ಅವಲಂಬಿಸಿವೆ. ಅನುಕೂಲತೆಗಳ ವಿವಿಧತೆಯ (veriety applications) ಅವಶ್ಯಕತೆಗಳನುಗುಣವಾಗಿ ಅವುಗಳಿಗೆ ಹೊಂದುವಂತೆ (adaptable) ಕ್ಲೌಡ್ ಸರ್ವರ ಗಳ ವ್ಯವಸ್ಥ್ಯೆಗಳು ಬಹಳ ವಿಶ್ವಾಸಾರ್ಹವಾಗಿ (reliable) ಕೆಲಸಮಾಡಬೇಕಾಗುತ್ತದೆ ಮತ್ತು ಅನುಕೂಲತೆಗಳ ಅವಶ್ಯಕತೆಗಳು ಪೂರೈಸಿದಮೇಲೆ ತನ್ನ ಸಂಪನ್ನೂಲಗಳನ್ನು ಇನ್ನೊಂದು ಅನುಕೂಲತೆಗೆ ಬಿಡುಗಡೆ ಮಾಡಬೇಕಾಗುತ್ತದೆ. ಇದಕ್ಕಾಗಿ ಅವುಗಳಿಗೆ ವಾಸ್ತುಶಿಲ್ಪದ ನಮ್ಯತೆ (architectural flexibility) ಮತ್ತು ಮರುಸಂರಚಿಸುವ ಸಾಮರ್ಥ್ಯ (reconfigurabilities) ಗಳಿರಬೇಕಾಗುತ್ತದೆ. ಇದನ್ನು ಬರಿ ತಂತ್ರಾಂಶವು (software) ವಾಖ್ಯಾನಿಸ (defines) ಬಹುದಾಗಿದೆ.

ಕ್ವಾಲ್ಕಾಮ್‌ನಿಂದ ಸಾಫ್ಟ್‌ವೇರ್ ವ್ಯಾಖ್ಯಾನಿಸಲಾದ ಚಿಪ್ಪಿನಲ್ಲಿನ ವ್ಯವಸ್ಥ್ಯೆ

ಇವುಗಳನ್ನು ತಂತ್ರಾಂಶದಿಂದ ವ್ಯಾಖ್ಯಾನಿಸಬಹುದಾದ ಚಿಪ್ಪಿನಲ್ಲಿನ ವ್ಯವಸ್ಥ್ಯೆಗಳಿಂದ ಸಾಧ್ಯ. ಕ್ಲೌಡ್ ವ್ಯವಸ್ಥ್ಯೆಗಳಲ್ಲಿ ತಂತ್ರಾಂಶವು ಅವುಗಳ ಹಂತ ಹಂತವಾಗಿ ಬೇಕಾಗುವ ಸಂಗ್ರಹಣ ಸಾಧನ(on chip memories organised as levels like L1 memory and L2 memories etc) ಗಳು, ಸಂಪರ್ಕ ಸಾಧನಗಳು (interface subsystems) ಮತ್ತು ಸಂಸ್ಕರಣ ಸಾಧನ (processor devices) ಗಳನ್ನು ಅನುಕೂಲತೆಗೆ ಬೇಕಾಗುವಂತೆ ಪುನರಚಿಸಿ ಅವುಗಳಿಗೆ ಒದಗಿಸುವುದಲ್ಲದೆ ಅವುಗಳ ಬಳಕೆಯ ನಂತರ ಮುಕ್ತಿಗೊಳಿಸಿ ಅವುಗಳನ್ನು ಮುಂದಿನ ಅನುಕೂಲತೆಗೆ ಸ್ವತಂತ್ರ್ಯಗೊಳಿಸುತ್ತದೆ. ಈ ಪ್ರಕ್ರಿಯೆ ವ್ಯವಸ್ಥ್ಯೆಯನ್ನು ಅನುಕೂಲತೆಗಳ ಅವಶ್ಯಕತೆಗಳನುಸಾರವಾಗಿ ಬಳಸಿ ಅತ್ಯಂತ ದಕ್ಷ ರೀತಿ (optimized) ಯಲ್ಲಿ ಬಳಸಲ್ಪಡುತ್ತದೆ. ಈ ಪರಿಕಲ್ಪನೆ ಹೆಚ್ಚಿನ ಕಾರ್ಯಕ್ಷಮತೆ (high performance) ಹೊಂದಿದ ವ್ಯವಸ್ಥ್ಯೆಗಳಿಗೆ ಸೂಕ್ತವಾಗಿದ್ದು ಈಗೀಗ ಅವುಗಳ ವಾಸ್ತುಶಿಲ್ಪ (architecture )ಮತ್ತು ರಚನೆ (design)ಯಲ್ಲಿ ಬಹು ಚಿಂತನೆಯಲ್ಲಿದೆ.

ಒಂದು ಚಿಪ್ಪಿನ(ಮಸಾಲ) ಕಥೆ

ಎರಡನೆ ಜಾಗತಿಕ ಯುದ್ಧದ ಕೊನೆಯ ಹಂತ. ಉಕ್ಕಿನ ಟ್ಯಾಂಕ್ ಕಾಲಮ್ಗಳು, ಕಲ್ಲಿದ್ದಲು, ಖನಿಜ ತೈಲ ಮತ್ತು ಉಕ್ಕಿನ ಸಾಮರ್ಥ್ಯ ಹೆಚ್ಚಾಗಿರುವ ಪಕ್ಷ ಗೆದ್ದ ಯುದ್ದ. ಅಮೇರಿಕ ತನ್ನ ಸೈನ್ಯವನ್ನು ತೈಲ, ತಾಮ್ರ, ಅಲ್ಯೂಮೀನಿಯಂ ಮತ್ತು ಉಕ್ಕನ್ನು ಬಳಸಿದ ಮಿಸೈಲ್ಗಳೊಂದಿಗೆ ಸಮೃದ್ಧವಾಗಿತ್ತು. ಇದನ್ನು ಉಕ್ಕಿನ ತಂತ್ರಜ್ಞಾನದ ಶಕ್ತಿಗಳ ನಡುವೆ ನಡೆದ ಸಮರವೆಂದೇ ಹೇಳಬಹುದು. ಈ ಸಮಯದಲ್ಲಿ ಯಾವುದೇ ಯುದ್ಧದಲ್ಲಿ ಅಮೇರಿಕ-ಚೀನಾದ ನಡುವಿನ ಶೀತಲ ಸಮರಇದ್ದೇ ಇರಬೇಕಲ್ಲವೇ? ಅಮೇರಿಕಾ ತನ್ನ ಎಲೆಕ್ಟ್ರಾನಿಕ್ಸ್ ತಂತ್ರಜ್ಛಾನದ ಮೇಲಿನ ಮೇಲ್ಮೈ ಉಳಿಸಿಕೊಳ್ಳುವದಕ್ಕೆ ಅದರ ಮೇಲೇ ರಫ್ತು ನಿರ್ಬಂಧನೆಗಳನ್ನು ಹೇರುತ್ತಲೂ, ಚೀನಾ ಅದರ ಮೇಲಿನ ಅವಲಂಬನೆಯನ್ನು ಅರಿತು ಈ ತಂತ್ರಜ್ಞಾನದ ಮೇಲೆ ಸ್ವಾವಲಂಬನೆ ಪಡೆಯಲು ಯಾವಾಗಲೂ ಹವಣಿಸುತ್ತಿರುತ್ತದೆ. ಈ ಸಮಯದಲ್ಲಿ ಚೀನಾ ಅಮೇರಿಕಾವನ್ನು ಆಕ್ರಮಣ ಮಾಡುವ ದಾರಿಯಲ್ಲಿ ಜಪಾನಿನ ಮೇಲೆ ದಾಳಿ ನಡೆಸಿದಾಗ, ಜಪಾನಿನ ಯುವಕರಿಗೆ ಮಿಸೈಲಿನ ಗುರಿಯನ್ನು ಸ್ವಯಂಚಾಲಿತವಾಗಿ ಗುರುತಿಸುವ ತಂತ್ರಜ್ಞಾನದ ಅಗತ್ಯತೆ ಹೊಳೆಯುತ್ತದೆ. ಖಚಿತವಾಗಿಲ್ಲವಾದರೂ ಹೇಗೋ, ಕಂಪ್ಯೂಟಿಂಗ್ ಶಕ್ತಿ (compute power) ಬಳಸಿದರೆ ಸ್ವಯಂಚಾಲಿತ ಗುರಿ ಪತ್ತೆ ತಂತ್ರಜ್ಞಾನದಲ್ಲಿ ಬಳಸುಬಹುದೆಂಬ ನಂಬಿಕೆ ಹೆಚ್ಚಾಗುತ್ತದೆ. ಗಣಿತದ ಕ್ರಮಗಳು ಮಾನವನಿಗೆ ಆ ಸಮಯದಲ್ಲಿ ಹೊಸತ್ತಲವಾದರೂ ಕೈಗುಣಿತ, ಪಟ್ಟಿ ಗಣಿತ (Math Tables)ದ ಮೇಲೆ ವಿಧಾನಗಳು ಮೇಲೆ ಸಾಗಿರಲಿಲ್ಲ. ಮಿಸೈಲ್ಗಳಲ್ಲಿ ಗಣಿತವನ್ನು ಬಳಸಲು ವಿಧಾನಗಳು ನಿಖರವಾಗಿಯೂ ವೇಗವಾಗಿಯೂ ಇರಬೇಕಾಗುತ್ತದೆ. ಈ ನಿಟ್ಟಿನಲ್ಲಿ ಚಿಂತನೆ ಸಾಗುತ್ತಿರಲು, ನಿರ್ವಾತ ಕೊಳವೆ (vacuum tube) ಬಳಸುವ ಗಣಿತದ ಆವಿಷ್ಕಾರ ಮಣಿ ಚೌಕ (abacus) ಬಳಸುವ ಯುಗಳ ಗಣಿತದಿಂದ ಸ್ವಲ್ಪ ಮಟ್ಟಿನ ಜಯ ತೋರುತ್ತದೆ. ಹೀಗೆ ಡಿಜಿಟಲ್ ಕಂಪ್ಯೂಟಿಂಗ್ (digital computing)ನ ಉದಯವಾಗುತ್ತದೆ. ಇದನ್ನೇ ಅವಲಂಬಿಸಿ ಇನಿಯಾಕ್ ಕಂಪ್ಯೂಟರ (Eniac computer)ನ್ನು ತಯಾರಿಸಲಾಗುತ್ತದೆ. ಆದರೇ ಇದರ ಸಮಸ್ಯೆ ಯೆಂದರೆ ಇದರ ಗಾತ್ರ ಮತ್ತು ಆಗಾಗ ಹೊರಬರುವ ತಪ್ಪುತ್ತರ.

ವಿಲಿಯಮ್ ಶ್ಯಾಕ್ಲೀ (William Schokley)
ಕೀಲಿನಿಂದ ಚಿಪ್ಪು (switch to chip): ಇದೆ ಸಮಯದಲ್ಲಿ ಬೆಲ್ಲ್ ಲ್ಯಾಬ್ಸನ ವಿಲಿಯಮ್ ಶ್ಯಾಕ್ಲೀ (William Schokley) ಎಂಬ ಇಂಜಿನಿಯರ್ ಕಂಪ್ಯೂಟಿಂಗ್ ನ ವೇಗ ಹೆಚ್ಚಿಸಲು ವಸ್ತು ವಿಜ್ಞಾನ (material science) ದಿಂದ ಮಾತ್ರ ಸಾಧ್ಯ ವೆಂದು ನಂಬಿ ಸಿಲಿಕೋನ್ (Silicon) ಮತ್ತು ಜರ್ಮೇನಿಯಂ (Germanium) ಅರೆವಾಹಕ (semiconductor)ಗಳ ಮೇಲೆ ಸಂಶೋಧನೆಮಾಡುತ್ತಿದ್ದರು. ಈ ವಸ್ತುಗಳು ಕೆಲಸಂಧರ್ಭಗಳಲ್ಲಿ ವಾಹಕಗಳಾಗಿಯೂ ಸಾಮಾನ್ಯವಾಗಿ ಅವಾಹಕಗಳಾಗಿಯೂ ವರ್ತಿಸುತ್ತವೆ. ಆದರೆ ಈ ವರ್ತನೆಗೆ ಕಾರಣ ತಿಳಿಯದೆ ನಿಗೂಢವಾಗಿತ್ತು. ಇದನ್ನು ಅರಿಯಲು ೧೯೪೫ರಲ್ಲಿ ಶ್ಯಾಕ್ಲಿ ಅರವಾಹಕ ಬಳಸಿ ಸಾಧನವನ್ನು ನಿರ್ಮಿಸಿ ಅದನ್ನು ೯೦ ವೋಲ್ಟ್ ಬ್ಯಾಟರಿಗೆ ಪೋಣಿಸಿ, ಅರೆವಾಹಕದ ಸುತ್ತ ವಿದ್ಯುತ್ ಕ್ಷೇತ್ರ ನಿರ್ಮಾಣವಾಗುತ್ತಲೆಂದೂ, ಅದು ಎಲೆಕ್ಟ್ರಾನ್ ಗಳನ್ನು ಅರೆವಾಹಕದ ವಸ್ತುವಿನ ಅಂಚಿಗೆ ಆಕರ್ಷಿಸುತ್ತದೆಂದೂ, ಹೀಗೆ ಅಂಚಿನಲ್ಲಿ ಹೆಚ್ಚುವರಿ ಎಲೆಕ್ಟ್ರಾನ್ಸಗಳಿದ್ದ ಕಾರಣ ವಾಹಕಗಳಾಗಿ ಪರಿವರ್ತನೆಯಾಗುತ್ತದೆಂದೂ ವ್ಯಾಖ್ಯಾನಿಸಿದನು. ಆದರೆ ಈ ಸಿದ್ಧಾಂತವನ್ನು ಸಾಬೀತುಪಡಿಸಲು ಸಾಧನಗಳು ದೊರಕದ ಕಾರಣ ಸಿದ್ಧಾಂತವಾಗಿಯೇ ಉಳಿಯಿತು.
ಎರಡು ವರ್ಷಗಳ ನಂತರ ಶ್ಯಾಕ್ಲೀಯ ಕಿರಿಯ ಸಂಶೋಧಕರು (Junior Researchers) ಜಾನ್ ಬಾರ್ಡೆನ್ ಮತ್ತು ವಿಲ್ಹೆಲ್ಮ್ ಬ್ರಟೇನ್, ಶ್ಯಾಕ್ಲೀಯ ಸಿದ್ಧಾಂತವನ್ನು ಸಾಭೀತುಮಾಡಬಯಸಿ ಜಯಸಾಧಿಸಿದರು. ಇವರುಗಳಿಗೆ ನೋಬೆಲ್ ಪುರಸ್ಕಾರವೂ ದೊರೆಯಿತು. ತದನಂತರ ಅವರುಗಳು ಶಿಕ್ಷಣತಜ್ಞರಾಗಿಯೇ ಉಳಿದರು.


ಜಾನ್ ಬಾರ್ಡೆನ್ ಮತ್ತು ವಿಲ್ಹೆಲ್ಮ್ ಬ್ರಟೇನ್ ಶ್ಯಾಕ್ಲೀ ಒಂದಿಗೆ

ಶ್ಯಾಕ್ಲೀ ತನ್ನ ಸಿದ್ಧಾಂತವನ್ನು ಬೇರೆಯವರು ನಿರೂಪಿಸಿದರಲ್ಲ ಎಂದು ಬೇಜಾರಿನಿಂದ ಮತ್ತು ಇನ್ನಷ್ಟು ಉತ್ತೇಜಿತಗೊಂಡು ತನ್ನ ಅವಿಷ್ಕಾರವನ್ನು ವಾಣಿಜ್ಯ ಬಳಕೆಗೆ ತರಲು ಮುಂದಾಗಿ ಕ್ರಿಸ್ಮಸ್ ಸಮಯದ ಎರಡುವಾರ ಒಂದು ಕೋಣೆಯಲ್ಲಿ ತನ್ನನ್ನು ತಾನೇ ಬೀಗ ಹಾಕಿಕೊಂಡ ಧೀರ್ಘ ಸಂಶೋಧನೆಯಲ್ಲಿ ತೊಡಗಿಸಿಕೊಂಡರು. ಇದರಿಂದ ಜಾನ್ ಬಾರ್ಡೆನ್ ಮತ್ತು ವಿಲ್ಹೆಲ್ಮ್ ಬ್ರಟೇನ್ ತಂಡದೊಂದಿಗೆ ಶುರುವಾಗಿದ್ದೇ ಶ್ಯಾಕ್ಲೀ ಸೆಮಿಕಂಡಕ್ಟರ್ ಲ್ಯಾಬೋರೇಟರಿ (Shockley Semiconductor Laboratory).

ವಿಲಿಯಂ ಬ್ರಾಡ್‌ಫೋರ್ಡ್ ಶ್ಯಾಕ್ಲೀ (1910-1989), ಜಾನ್ ಬಾರ್ಡೀನ್ (1908-1991) ಮತ್ತು ವಾಲ್ಟರ್ ಬ್ರಾಟೈನ್ (1902-1987) ತಂಡವನ್ನು ಟ್ರಾನ್ಸಿಸ್ಟರ್‌ನ ಪಿತಾಮಹ ಎಂದು ಕರೆಯಬಹುದು. ಇದು ಬಹುಶಃ ಇಪ್ಪತ್ತನೇ ಶತಮಾನದ ಮಹಾನ್ ಮೂಕ ಕ್ರಾಂತಿಯಾಗಿದೆ.

ಇವರೊಟ್ಟಿಗೆ ಎಂಟು ಜನ ಸಂಶೋಧಕರಾದ ಜೂಲಿಯಸ್ ಬ್ಲಾಂಕ್ (Julius Blank), ವಿಕ್ಟರ್ ಗ್ರಿನಿಚ್ (Victor Grinich), ಜೀನ್ ಹೋರ್ನಿ (Jean Hoerni), ಯುಜೀನ್ ಕ್ಲೀನರ್ (Eugene Kleiner), ಜೇ ಲಾಸ್ಟ್, (Jay Last,) ಗಾರ್ಡನ್ ಮೂರ್ (Gordon Moore), ರಾಬರ್ಟ್ ನೋಯ್ಸ್ (Robert Noyce) ಮತ್ತು ಶೆಲ್ಡನ್ ರಾಬರ್ಟ್ (Sheldon Robert) ಗಳು ಕೂಡ ಸೇರಿಕೊಂಡರು.

                          ಶಾಕ್ಲಿ ಸೆಮಿಕಂಡಕ್ಟರ್ ತಂಡ

ಆದರೇ ಈ ವ್ಯವಸ್ಥೆ ಕೆಲಸಮಯ ಮಾತ್ರ ಉಳಿದು ಶ್ಯಾಕ್ಲೀಯ ಸರ್ವಾಧಿಕಾರದ ನಾಯಕತ್ವದಲ್ಲಿ ಬಹು ಬೇಗ ಜಿಗುಪ್ಸೆಗೊಳಗಾದರು. ಇದರಿಂದ ಹುಟ್ಟಿ ಕೊಂಡಿದ್ದೇ ಫೇರ್‌ಚೈಲ್ಡ್ ಸೆಮಿಕಂಡಕ್ಟ್ ರ್ (Fairchild Semiconductor). ಈ ಎಂಟು ಜನ ಸಂಷೋಧಕರನ್ನು ಶಾಕ್ಲಿ ಸೆಮಿಕಂಡಕ್ಟರ್ ದೇಶದ್ರೋಹಿ ಎಂಟೆಂದು (traitors eight) ಕರೆಯಲಾಯಿತು. ಇದೇ ರಾಬರ್ಟ್ ನೋಯ್ಸ್ ಮತ್ತು ಗಾರ್ಡನ್ ಮೂರ್ ಅವರ ನಾಯಕತ್ವದಲ್ಲಿ, ಫೇರ್‌ಚೈಲ್ಡ್ ಸೆಮಿಕಂಡಕ್ಟರ್ ತ್ವರಿತವಾಗಿ ಅರೆವಾಹಕ ಉದ್ಯಮದಲ್ಲಿ ಪ್ರವರ್ತಕ ಶಕ್ತಿಯಾಯಿತು. ಈ ಕಂಪನಿಯು ಅರೆವಾಹಕ ತಂತ್ರಜ್ಞಾನಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡಿತು, ಇದು ಇಂಟಿಗ್ರೇಟೆಡ್ ಸರ್ಕ್ಯೂಟ್‌ಗಳ ತಯಾರಿಕೆಯಲ್ಲಿ ಕ್ರಾಂತಿಯನ್ನುಂಟುಮಾಡಿತು. ಇಧೇ ಸಿಲಿಕೋನ್ ಚಿಪ್ ಗೆ ನಾಂಧಿಯೀಯಿತು.
ಫೇರ್‌ಚೈಲ್ಡ್ ಸೆಮಿಕಂಡಕ್ಟರ್ ಸಿಲಿಕಾನ್ ವ್ಯಾಲಿಯ ತಂತ್ರಜ್ಞಾನ ಪರಿಸರ ವ್ಯವಸ್ಥೆ( Semiconductor ecosystem) ಯನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿತು ಮತ್ತು ನಂತರದ ಅನೇಕ ಇತರ ಅರೆವಾಹಕ ಕಂಪನಿಗಳಿಗೆ ಅಡಿಪಾಯವನ್ನು ಹಾಕಿತು.
ಈ ಚಿಪ್ಪಿನ ಕಥೆಯೇ ಇವತ್ತಿನ ಅರೆವಾಹಕ ಸಾಧನಗಳ ಉಧ್ಯಮಕ್ಕೆ ಕಾರಣವಾಯಿತು. ಯುದ್ದದ ಮಿಸೈಲ್ಗಳ ಅವಶ್ಯಕತೆ, ಕಂಪ್ಯೂಟಿಂಗ್ ಅವಶ್ಯಕತೆಯಾಗಿ ಡಿಜಿಟಲ್ ಕಂಪ್ಯೂಟಿಂಗ್ ಗೆ ತಳಹಧಿಹಾಕಿ, ಅದಕ್ಕೇ ಬಾಕಾಗುವ ಕೀಲಿ (solid state switch) ಯ ಅವಿಷ್ಕಾರವಾಗಿ ಅವುಗಳ ಬಹು ಜೋಡಣೆಯ ಕಥೆಯೇ ಈಗಿನ ನಾಗಾಲೋಟದಲ್ಲಿ ಸಾಗುತ್ತಿರುವ ಉಧ್ಯಮದ ತಳಪಾಯದ ಒಂದು ಚಿಪ್ಪಿನ ಕಥೆ.
ಈ ಕಥೆ ಯ ಮೂಲ ಆಧಾರ ಕ್ರಿಸ್ ಮಿಲ್ಲರ್ ಅವರ ಚಿಪ್ ವಾರ್ (Chip war by Chris Miller) ಪುಸ್ತಕ. ನಾನು ಈ ಚಿಪ್ಪಿನ ಕಥೆಯನ್ನು ಆನಂದಿಸಿದೆ ಮತ್ತು ನೀವು ಸಹ ಆನಂದಿಸುತ್ತೀರಿ ಎಂದು ನಾನು ಭಾವಿಸುತ್ತೇನೆ

2023: An year at a glance

It’s that time again for reflection and gathering energy to move into the new year. 2023 was a year of stability, a steady pace, and consolidating the past while also looking forward. It allowed me to revisit moments that were long forgotten in the hustle of life—a more mindful year.
The year kicked off with a family gathering to welcome 2023. In the first week of January, I received the second edition copies of my first book. The year began with a visit to Mysore, Biligiri Rangan Betta, and NIE Mysore for a research review. However, the first quarter was mainly dedicated to wrapping up unfinished tasks from 2022, whether at work or in my personal hobby of creating a hundred pencil sketches. With limited time to think about new beginnings, I found a great sense of accomplishment in completing the second edition of my book, overseeing the completion of my last candidate’s PhD, and gaining new insights at work. Finally, I achieved the milestone of finishing my hundredth pencil sketch, which I had started the previous year. I got to attend few of important events with some good family times. Some of the high moments of the quarter are captured in the figure below.


The second quarter had some notable moments, including giving talks at IISc, DSATM, and Signoff Semiconductor. I dedicated time to authoring book chapters on SOC Architecture, involving both writing and rewriting. Achieving a sense of satisfaction, I finally submitted the book draft. During this period, I took on an ambitious hobby of writing a hundred technical blogs in Kannada for the year, albeit starting a quarter late. Now, with only 50 blogs completed, it seems justified given the circumstances. I admit I could have done better, as lately, there hasn’t been enough motivation to pursue this goal. This is one unfinished activity in this year.


The third quarter focused on work, proof reading the submitted book, picturing it in my hands and successfully clearing the research for PhD evaluation. It was during this time, I found a newfound passion for Kannada writing, recognising my proficiency—thanks to my mom and my Kannada teacher from school! I managed to produce more Kannada blogs during this quarter, posting almost one blog per week. Meanwhile, in late August, the book on SOC architecture was published, bringing a great sense of achievement. Another interesting event was meeting a friend after more than thirty years. That was a nostalgic moment during this quarter.

A noteworthy moment in the third quarter was receiving hard copies of our fourth and fifth publications (counting the book where I was the chief editor). It was truly exciting for me. Another memorable event worth mentioning was participating in the Taneira Saree Marathon, a three-kilometer run with friends.


The fourth quarter already signaled the start of the year’s end, reminding me of numerous pending tasks and urging me to hurry up. The quarter was filled with work, blogging for fun and entertainment, a walkathon, time with friends and family (not forgetting Milo in the family).
Overall, this year was a bundle of achievements with two book publications, 50 Kannada blogs, watching multiple web series and movies, occasional pencil sketching, and minimal reading (just two books this year). I also participated in a marathon and a walkathon. However, I acknowledge that there’s room for improvement in my writing and reading habits. A new interest that has caught my attention in the last two months is learning the German language.
Personally this year has been a year to be more grateful for plenty of reasons. As we bid adieu to 2023, I have resolved to declutter my life by letting go of unnecessary things, aiming to focus more on adding value to myself and those around me. I am excited to see what the new year has in store for me, and there are already signs of a busy start to the year.

Embrace the unfolding chapters, welcome the unwritten moments, and let the canvas of a new year be painted with the vibrant hues of hope, love, and endless possibilities. Wish you all a very happy new year 2024.

ಹೈಪರ್ಲೂಪ್ (ಹೆಚ್ಚುವರಿ ಕುಣಿಕೆ) Hyperloop

https://www.youtube.com/watch?app=desktop&v=LecFycshfXU

ಐಐಟಿ ಚೆನ್ನೈ (IIT Chennai) ಯಲ್ಲಿ ವಿದ್ಯಾರ್ಥಿಗಳು ಇಲಾನ್ ಮಸ್ಕರ ಜಾಗತಿಕ ಸ್ಪೇಸ್ ಎಕ್ಸ್ (Space X) ಸ್ಪರ್ಧೆ ಯಲ್ಲಿ ಭಾಗವಹಿಸಿ ಏಷ್ಯಾ ಖಂಡದ ಏಕೈಕ ಕೊನೆಯ ಹಂತದ ಸ್ಪರ್ಧಿಯಾಗಿ ಹೊರಬಂದು ನಂತರ ಅವಿಷ್ಕಾರ ಹೈಪರ್ಲೂಪಿನ ಮೂಲಮಾದರಿ ಯನ್ನು ಅಭಿವೃದ್ಧಿ ಪಡಿಸಿದ ಸುದ್ದಿಯೂ ಎಲ್ಲರಿಗೂ ಹೆಮ್ಮೆಯ ವಿಷಯವೇ ಸರಿ. ಇದೀಗ ಭಾರತ ಸರ್ಕಾರದ ಪ್ರೋತ್ಸಾಹ, ಭಾರತೀಯ ರೈಲು (Indian Railways) ಸಂಸ್ಥೆಯ ಬೆಂಬಲ ಸಿಕ್ಕಿರುವುದು ಇತ್ತೀಚಿನ ಉತ್ತುಂಗಕ್ಕೇರಿರುವ ರಸ್ತೆ ಸಾರಿಗೆಯ ಅಡಚಣೆಯ ಸಮಯದಲ್ಲಿ ನಮ್ಮೆಲ್ಲರ ಸಾರಿಗೆ ವ್ಯವಸ್ಥೆಯ ಕ್ರಾಂತಿಯ ಕನಸಿಗೆ ಮತ್ತು ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಪುಷ್ಠಿಕೊಟ್ಟಂತಾಗಿದೆ. ಈ ಟಪಾಲಿನಲ್ಲಿ ಅದರದೇ ವಿವರವಿದೆ.
ಹೈಪರ್ಲೂಪ್ ಅತೀ ವೇಗದ ಪ್ರಯಾಣಿಕ ಮತ್ತು ಸರಕು ಸಾಗಣೆಯ ಕ್ರಾಂತಿಕಾರಿ ವಿಧಾನವಾಗಿದೆ. ಇದನ್ನು ಇಲಾನ್ ಮಸ್ಕರು ೨೦೧೨ರಲ್ಲಿ ಶ್ವೇತಪತ್ರ (White paper) ವಾಗಿ ಪರಿಚಯಿಸಿದರು. ನಂತರ ತಮ್ಮ ಸ್ಪೇಸ್ ಏಕ್ಸ ಮತ್ತು ಇನ್ನಿತರ ಸಂಸ್ಥೆಗಳ ಜೊತೆಗೂಡಿ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಪ್ರೋತ್ಸಾಹಿಸಿದರು. ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಇಡಿಸಿ ಅನೇಕ ಅವಿಷ್ಕಾರಿಗಳಿಗೆ ಮತ್ತು ನವೋದ್ಯಮಿಗಳಿಗೆ ಕರೆಇತ್ತರು. ಇದರಲ್ಲೇ ನಮ್ಮ ಐಐಟಿ ಚೆನ್ನೈ ವಿದ್ಯಾರ್ಥಿಗಳು ಪಾಲ್ಗೊಂಡು ತಮ್ಮ ಸಾಮರ್ಥ್ಯ ಪ್ರದರ್ಶಿಸದದ್ದು ಎಲ್ಲರಿಗೂ ಗೊತ್ತೇ ಇದೆ.
ಹೈಪರ್ಲೂಪ್ ತಂತ್ರಜ್ಞಾನದ ಪರಿಕಲ್ಪನೆ (concept) ಯು ವಿಶೇಷವಾಗಿ ವಿನ್ಯಾಸಗೊಳಿಸಿದ ಗುಳಿಗೆ ಅಥವಾ ಪಾಡ್ಗ (Pods) ಳನ್ನು ಭಾಗಶಃ ನಿರ್ವಾತ(Partial vacuum) ಗೊಳಿಸಿದ ಉಕ್ಕಿನ ಕೊಳವೆ (ಯಲ್ಲಿ ಕಳಿಸಲಾಗುತ್ತದೆ. ಪಾಡ್ ಗಳು ನಿರ್ವಾತ ಕೊಳವೆ (vacuum tubes) ಯಲ್ಲಿ ಗಾಳಿ ಇಲ್ಲದ ಕಾರಣ, ತುಂಬಾ ಕಡಿಮೆ ಘರ್ಷಣೆಗೆ ಒಳಗಾಗಿ ಅತೀ ವೇಗದಲ್ಲಿ ಅಂದರೇ ಸುಮಾರು ೭೦೦ ಕಿ ಮೀ ೧೧೦೦ ಕಿ ಮೀ ವೇಗದಲ್ಲಿ ಚಲಿಸುತ್ತದೆ. ಕೊಳವೆಯ ಒಳಭಾಗದಲ್ಲಿ ಕಡಿಮೆ ಪ್ರತಿರೋಧ (Friction) ವಿರುವ ಕಾರಣ ಅತಿ ವೇಗದ ಪ್ರಯಾಣ ವನ್ನು ಸಕ್ರಿಯಗೊಳಿಸುತ್ತದೆ. ಪಾಡಗಳು ವಾಯುಬಲ ವಿಜ್ಞಾನಕ್ಕೆ (Aerodynamic design) ಅನುಗುಣವಾಗಿ ವಿನ್ಯಾಸ ಗೊಳಿಸಲಾಗುತ್ತದೆ. ಇದರ ಚಲನೆಗೆ ಒತ್ತುಕೊಡಲು ಗಾಳಿ ಸಂಚಾಲಕ ಅಥವಾ ಪ್ರೊಪಲ್ಷನ್ (Air propulsion) ಮತ್ತು ಕಾಂತೀಯ ಪ್ರೊಪಲ್ಷನ್ (Magnetic levitation) ಯಂತ್ರವನ್ನು ಬಳಸಲಾಗುತ್ತದೆ.
ಹೈಪರ್ಲೂಪಗಳು ಅತೀ ಕಡಿಮೆ ಶಕ್ತಿ ಬಳಸುವ ಸಾರಿಗೆ ಯಾಗಿದ್ದು ನವೀಕರಿಸುವ ಶಕ್ತಿ ( renewable sources) ಯನ್ನು ಬಳಸುತ್ತದೆ. ಸುರಕ್ಷತೆಯು ಹೈಪರ್ಲೂಪಿನ ಅತೀ ಮುಖ್ಯ ಅಂಶವಾಗಿದ್ದು ಯಾವುದೇ ತಾಂತ್ರಿಕ ಸಮಸ್ಯೆ ಯ ಸಂಧರ್ಭದಲ್ಲಿ ಪ್ರಯಾಣಿಕರ ಸುರಕ್ಷತೆಗೆ ತುರ್ತು ವ್ಯವಸ್ಥೆ (safety emergency systems) ಮತ್ತು ವಿಫಲಸುರಕ್ಷಾ ಘಟಕ (fail proof systems) ಗಳನ್ನು ಅಳವಡಿಸಬೇಕಾಗುತ್ತದೆ.
ಬಹು ಸಂಸ್ಥೆಗಳು ಈಗಾಗಲೇ ಈತಂತ್ರಜ್ಞಾನ ಅಭಿವೃದ್ಧಿ ಪಡಿಸುತ್ತಿದ್ದು ಕೆಲವೊಂದು ಸಂಸ್ಥೆಗಳು ಈಗಾಗಲೆೇ ಪ್ರಯಾಣಿಕರೊಂದಿಗೆ ಪರೀಕ್ಷಾ ಚಾಲನೆ (test runs) ಮಾಡಿವೆ.
ಭಾರತದಲ್ಲಿ ಇದರ ಪರೀಕ್ಷೆಗೆ ೫೦೦ ಕಿ ಮೀ ದೂರದ ಹಳಿ ಯನ್ನು ಚೆನ್ಯೈನಲ್ಲಿ ನಿರ್ಮಿಸಲಾಗುತ್ತಿದೆ.
ಭಾರತದ ಐಐಟಿ ಚೆನ್ನೈ ಸಂಶೋಧಕರು ನಿರ್ಮಿಸಿದ ಆವಿಷ್ಕಾರ ಪಾಡಿನ ಮಾದರಿಯ ಪರೀಕ್ಷಾ ಪ್ರದರ್ಶನ ನಡೆದಿದ್ದು ವಿದ್ಯಾರ್ಥಿಗಳು ನಿರ್ವಹಿಸುವ ಏಷ್ಯಾದಲ್ಲೆ ಪ್ರಪ್ರಥಮ ಪರೀಕ್ಷಾ ಘಟಕವಾಗಲಿದೆ.
ಅತೀ ಮುಖ್ಯವಾಗಿ ಹೈಪರ್ಲೂಪ ಅಭಿವೃದ್ಧಿಗಾಗಿ ಅನೇಕ ಸಂಘಸಂಸ್ಥೆಗಳು ಒಟ್ಟಾಗಿ ಪಾಲುಗಾರಿಕೆಗೆ ಮುಂದೆಬಂದಿದ್ದು ಹೈಪರ್ಲೂಪನ ಪ್ರಮಾಣೀಕರಣ (hyperloop standard) ವಾಖ್ಯಾನಿಸುತ್ತಿವೆ.
ಅಲ್ಲದೆ ಬೆಂಗಳೂರು -ಚೆನ್ನೈ, ಅಮರಾವತಿ-ವಿಜಯವಾಡ, ಮುಂಬೈ-ಪೂನಮತ್ತು ದೆಹಲಿ-ಇಂಡೋರ್-ಕೋಟಾ-ಜೈಪೂರ್ ಹೈಪರ್ಲೂಪ ಯೋಜನೆಗಳು ಚಾಲನೆಯಲ್ಲಿವೆ.
ಜಾಗತಿಕ ಮಟ್ಟದಲ್ಲಿ ವಿವಿಧ ದೇಶಗಳಲ್ಲಿ ಅರೈವೋ, ನೆವೋಮೋ, ಯುರೋ ಟ್ಯೂಬ್, ಟಿಯೂಎಮ್ ಹೈಪರ್ಲೂಪ್ ಯೋಜನೆಗಳು ಅನೇಕ ಪ್ರಯೋಗಗಳನ್ನು ಮಾಡುತ್ತಿವೆ
ಹೆಚ್ಚಾಗಿರುವ ಸಾರಿಗೆ ಸಮಸ್ಯೆಗಳಿಗೆ ಹೈಪರ್ಲೂಪೊಂದು ಆಶಾ ಕಿರಣವಾಗಿದ್ದು ಅತೀ ಬೇಗ ಬಳಕೆಗೆ ಬರುವಂತಾಗಲೆಂದು ಆಶಿಸುವಂತಾಗಿದೆ.

ಆದಿತ್ಯ ಎಲ್ ೧: ಮತ್ತೊಂದು ಮಹತ್ವಾಕಾಂಕ್ಷೆ (Aditya L1: Another ambition)

ಆದಿತ್ಯ ಹೃದಯಂ ಸ್ತೋತ್ರ ಎಲ್ಲ ಸ್ತೋತ್ರಗಳಲ್ಲೂ ಶ್ರೇಷ್ಠವಂತೆ. ಅದರಲ್ಲೇ ಬರುವ ಎರಡು ಪಂಕ್ತಿಗಳು ಇಲ್ಲಿವೆ:

ತಮೋಘ್ನಾಯ ಹಿಮಘ್ನಾಯ ಶತ್ರುಘ್ನಾಯ ಮಿತಾತ್ಮಿನೇ
ಕೃತಘಂಘ್ನಾಯ ದೇವಾಯ ಜೋತಿಷಂ ಪತಯೇ ನಮಃ (೨೦)

ಅಂದರೇ,

ಅಂಧಕಾರವನ್ನು ಹೋಗಲಾಡಿಸುವವನು, ಹಿಮವನ್ನು ನಾಶಮಾಡುವವನು, ಶತ್ರುಗಳನ್ನು ಹೋಗಲಾಡಿಸುವವನು, ಅವನ ವಿಸ್ತೀರ್ಣವು ಅಳೆಯಲಾಗದು,
ಎಲ್ಲದಕ್ಕೂ ಭಗವಂತ, ನಿಷ್ಕಪಟರನ್ನು ನಾಶಮಾಡುವವನು, ನಕ್ಷತ್ರ ಶರೀರಗಳ ಉಸ್ತುವಾರಿ, ನಾನು ನಿಮಗೆ ನಮಸ್ಕರಿಸುತ್ತೇನೆ

ಏಷಾ ಸುಪ್ತೇಷು ಜಾಗೃತೀ ಭೂತೇಷು ಪರಿನಿಷ್ಠಿತಃ
ಏಷ ಚೈವಾಗ್ನಿಹೋತ್ರಂ ಚ ಫಲಂ ಚೈವಾಗ್ನಿ ಹೋತ್ರಿಣಾಮ್ (23)

ಅಂದರೇ,

ಓ ಎಲ್ಲಾ ಜೀವಿಗಳಲ್ಲಿ ವಾಸಿಸುವವ, ಅವರು ಮಲಗಿರುವಾಗಲೂ ಅವುಗಳನ್ನು ಎಚ್ಚರವಾಗಿರಿಸಿಕೊಳ್ಳುವವನೇ,
ಯಾರು ಸ್ವತಃ ಅಗ್ನಿಹೋತ್ರ ಮತ್ತು ಅದರ ಫಲವನ್ನು ಅಗ್ನಿಹೋತ್ರದ ಆರಾಧಕರು ಸಾಧಿಸುತ್ತಾರೆ.

ಮೂವತ್ತೊಂದು ಪಂಕ್ತಿಯ ಈ ಸ್ತೋತ್ರವನ್ನು ನಮ್ಮ ಪೂರ್ವಿಕರು ಪ್ರತೀ ರವಿವಾರ ಪಠಿಸುತ್ತಿದ್ದರು ಮತ್ತು ಅದರ ಮಹತ್ವದ ಬಗ್ಗೆ ಹೇಳಿ ಎಲ್ಲರನ್ನೂ ಪಠಿಸುವಂತೆ ಪ್ರೋತ್ಸಾಹಿಸುತ್ತಿದ್ದರು. ಅದರ ಮಹತ್ವ ಮತ್ತು ಒಳ್ಳೆಯ ಪರಿಣಾಮಗಳು ನಮ್ಮೆಲ್ಲರಿಗೆ ಈಗಲೂ ಬೇಕಾಗಿದ್ದರೂ ಅದರ ಪಠಣೆಯ ಪ್ರಕ್ರಿಯೆ ಮಾತ್ರ ನಾವೆಲ್ಲರೂ ಮರೆಯುವಷ್ಟು ಮುಂದುವರೆದಿದ್ದೇವೆ. ಅದಕ್ಕೆ ಕಾರಣ ವಿಜ್ಞಾನದ ಮಹಿಮೆ ಮತ್ತು ಇಂದಿನ ವೇಗದ ಜೀವನಶೈಲಿ ಎನ್ನೋಣ. ಈಗ ಈ ಆದಿತ್ಯ ಎಲ್ ೧ ನನ್ನು ಬೆನ್ನು ಹತ್ತಿರುವ ಇಸ್ರೋ ಪ್ರಯೋಗಕ್ಕೆ ಬರೋಣ.

ಚಂದ್ರಯಾಣ ಮೂರರ ವಿಜಯದ ಖುಷಿಯಲ್ಲಿ ಇನ್ನೂ ನಾವೆಲ್ಲ ತೇಲುತ್ತಿರುವಾಗಲೇ ಇಸ್ರೋ ಆದಿತ್ಯ ಎಲ್ ೧ (Aditya L1) ಎಂಬ ಬಾಹ್ಯ ನೌಕೆಯನ್ನು ಸೆಪ್ಟೆಂಬರ್ ೨ ರಂದು ೧೧.೫೦ಕ್ಕೆ ಸೂರ್ಯನೆಡೆಗೆ ಕಳುಹಿಸಲಾಯಿತು. ಇದು ಸೌರಮಂಡಲದ ಬಗ್ಗೆ ಅಧ್ಯಯನಮಾಡುವ ಸನ್ನಾಹದಲ್ಲಿದೆ. ಇದು ಭಾರತದ ಇಸ್ರೋದ ಮೊದಲನೆಯ ಸೂರ್ಯನ ಅಧ್ಯಯನದ ಗುರಿ (solar study mission) ಯಾಗಿದೆ. https://www.youtube.com/watch?v=_IcgGYZTXQw

ಇದರ ಮೂದಲು ಸೂರ್ಯನ ಅಧ್ಯಯನದ ಗುರಿ ಹೊಂದಿದ ಪ್ರಯತ್ನಗಳಲ್ಲಿ ಅಮೇರಿಕಾದ ನಾಸಾ (NASA) ಸಂಸ್ಥೆಯ ಪಾರ್ಕರ್ ಸೌರ ಶೋಧಕ (Parker solar probe) ಅಗಸ್ಟ ೨೦೧೮ ರಲ್ಲಿ, ಅಮೇರಿಕಾ ಮತ್ತು ಯುರೋಪಿನ ಜೊತೆಗೆ ಮತ್ತು ನಾಸಾ, ಯೂರೋಪ್ ಮತ್ತು ಜಪಾನ್ ಜಂಟಿ ಯಾಗಿ ನಿರ್ಮಿಸಿದ ಸೌರ ಮತ್ತು ಸೂರ್ಯಗೋಳದ ವೀಕ್ಷಣಾಲಯ ಸೋಹೋ (Solar and Heliospheric Observatory)

ಜಪಾನಿನ ಆಸ್ಟ್ರೋ ಏ (Astro A) ೧೯೮೧ರಲ್ಲಿ ಬಾಹ್ಯಾಕಾಶಕ್ಕೆ ಕಳುಹಿದ ಕೃತಕ ಉಪಗ್ರಹ. ಇದು ಸೌರಜ್ವಾಲೆ (Solar flakes) ಗಳನ್ನು ಕಠಿಣ ಎಕ್ಸ್ ಕಿರಣ (hard x rays) ಗಳನ್ನು ಬಳಸಿ ಅಧ್ಯಯನ ಮಾಡುತ್ತಲಿದೆ. ಜಪಾನಿನ (ನಾಸಾ ಮತ್ತು ಇಎಸ್ಏ ಜೊತೆ) ಇನ್ನಿತರ ಸಂಶೋಧನೆ ಗುರಿ ಹೊಂದಿರುವ ೧೯೯೧ರ ಸೋಲಾರ್ ಏ (solar A)ಮತ್ತು ಅಸ್ಥಿರ ಪ್ರದೇಶ (Dynamic Region )ಮತ್ತು ೧೯೯೮ ರ ಕರೋನಲ್ ಎಕ್ಸ್ಪೋರರ್ (coronal explorar) ಟ್ರೇಸ್(Trace) (ನಾಸಾ ಜೋತೆಗೂಡಿ) ೨೦೦೬ರ ಸೋಲಾರ್ ಬಿ (Solar B) ಭೂಮಿ ಮೇಲೆ ಸೂರ್ಯನ ಪ್ರಭಾವ (Sun’s Impact) ವನ್ನರಿಯುವ ಗುರಿಇಟ್ಟುಕೊಂಡಿದೆ.

೧೯೯೦ರ ಯೂಲಿಸಿಸ್ (ULYSSES) ಯೂರೋಪ್ ನ ಇಎಸ್ ಏ (ESA) ಕಳಿಸಿದ ಉಪಗ್ರಹವು ಸೂರ್ಯನ ಎರಡೂ ಧ್ರುವಗಳ ಅಧ್ಯಯನದ ಗುರಿಹೊಂದಿದೆ. ಅದಲ್ಲದೆ ನಾಸಾ ಮತ್ತು ಜಪಾನಿನ ಜೊತೆಗೂಡಿ ಅಕ್ಟೋಬರ್ ೨೦೦೧ ರಲ್ಲಿ ಪ್ರಭಾ ೨ (Project for On-Board Autonomy 2 (PRABA 2)) ನಾಲ್ಕು ಪ್ರಯೋಗಗಳನ್ನು ಮಾಡುವ ಉದ್ದೇಶವಿಟ್ಟುಕೊಂಡಿದೆ. ಇನ್ನೂ ಪ್ರಭಾ ೩ (PRABA 3) ೨೦೨೪ರ ಮತ್ತು ಸ್ಮೈಲ್ (SMILE) ೨೦೨೫ ರಲ್ಲು ಕಳುಹಿಸುವ ಸನ್ನಾಹದಲ್ಲಿದೆ.

ಚೈನಾದ ಏಎಸ್ಓಎಸ್ (ASOS) ೨೦೨೨ ರಲ್ಲಿ ಯಶಸ್ವೀ ಉಡಾವಣೆ ಮಾಡಿದೆ.

ಸೆಪ್ಟೆಂಬರ್ ೨ರ ಸೌರ್ಯ ಶೋಧಕ ಗುರಿಹೊಂದಿರುವ ಆದಿತ್ಯ ಎಲ್ ೧ (Aditya L1) ಬಗ್ಗೆ ಕೆಲವು ಮಾಹಿತಿಗಳು ಇಲ್ಲಿದೆ.

ಆದಿತ್ಯವನ್ನು ಭೂಮಿಯಿಂದ ಸುಮಾರು ೧.೫ ದಶಲಕ್ಷ ಕಿಮೀ (1.5 million KM) ದೂರದ ಸೂರ್ಯ ಮತ್ತು ಭೂಮಿಯ ವ್ಯವಸ್ಥೆಯ ನಡುವಿನ ಲಾಂಗ್ರಾಂಜ್ ಬಿಂದು ೧ (Lagrange point 1) ವಿನಲ್ಲಿರಸಲಾಗುತ್ತದೆ. ಈ ಜಾಗದಲ್ಲಿ ಸೂರ್ಯನ ಮತ್ತು ಭೂಮಿಯ ಅಥವಾ ಇತರ ಗ್ರಹಗಳ ಗುರುತ್ವಾಕರ್ಷಣೆ (gravitational attraction and repulsion) ಸಮವಾಗಿ ಮತ್ತು ವಿರುದ್ದ ದಿಕ್ಕಿನಲ್ಲಿರಿಸಿ ಅಲ್ಲಿರುವ ವಸ್ತುಗಳನ್ನು ಕೇಂದ್ರಾಕೃತಿಯ ಬಲ (centripetal force) ಕರುಣಿಸಿ ಅವುಗಳನ್ನು ಕಕ್ಷೆಯಲ್ಲಿ ಸಮತೋಲನದೊಂದಿಗೆ ಯಾವುದೇ ಇಂಧನ ಬಳಸದೇ ಚಲಿಸುವಂತೆ ಮಾಡುತ್ತದೆ. ಇದನ್ನು ಪವಿತ್ರ ಕಕ್ಷೆ ಯೆನ್ನುತ್ತಾರೆ.

ಮೂಲ: ನಾಸಾ (Source: NASA)

ಈ ಜಾಗದಲ್ಲಿರುವ ಉಪಗ್ರಹಗಳಿಗೆ ಯಾವುದೇ ಗ್ರಹಗಳು ಅಡ್ಡಬರದೇ, ಗ್ರಹಣಗಳಿಲ್ಲದೇ ಸೂರ್ಯನನ್ನು ನಿರಂತರವಾಗಿ ವೀಕ್ಷಿಸುವ ಸಾಮರ್ಥ್ಯ ದೊರೆಕುತ್ತದೆ. ಆದಿತ್ಯ ಎಲ್ಲ ೧ ಅನ್ನು ಇಲ್ಲಿರಿಸ ಬೇಕಾಗಿದೆ. ಚಂದ್ರಯಾನ 3 ನಲ್ಲಿ ಮಾಡಿದಂತೆಯೇ ಕಕ್ಷೆ ವರ್ಧನೆಯ ಪ್ರಕ್ರಿಯೆಯಿಂದ ಆದಿತ್ಯ ಎಲ್ 1 ಅನ್ನು ಎಲ್ 1 ಸ್ಥಾನಕ್ಕೆ ಸೇರಿಸಲಾಗುತ್ತದೆ. ಆರಂಭದಲ್ಲಿ ಇದು ವೃತ್ತಾಕಾರದ ಕಕ್ಷೆಯನ್ನು ತೆಗೆದುಕೊಳ್ಳುತ್ತದೆ ಮತ್ತು ನಂತರ L1 ಅನ್ನು ತಲುಪುವವರೆಗೆ ದೀರ್ಘವೃತ್ತದ ಕಕ್ಷೆಗೆ ಕವಲೊಡೆಯುತ್ತದೆ. ಇದು ಅಲ್ಲಿಂದ ಸೌರ ಚಟುವಟಿಕೆ (Solar activities) ಗಳನ್ನು ಮತ್ತು ನೈಜ ಸಮಯದಲ್ಲಿಬಾಹ್ಯಾಕಾದ ಹವಾಮಾನ(real time space environment) ವನ್ನು ಅಧ್ಯಯನಮಾಡಲು ಅನುಕೂಲಕರವಾಗಿ ಏಳು ಪೇಲೋಡ್ (7 payloads) ಗಳನ್ನು ಹೊಂದಿದೆ. ಇವುಗಳು ಬಾಹ್ಯಾಕಾಶ ನೌಕೆಯು ವಿದ್ಯುತ್ಕಾಂತೀಯ ಮತ್ತು ಕಣ ಮತ್ತು ಕಾಂತೀಯ ಕ್ಷೇತ್ರ ಶೋಧಕಗಳನ್ನು ಬಳಸಿಕೊಂಡು ದ್ಯುತಿಗೋಳ, ವರ್ಣಗೋಳ ಮತ್ತು ಸೂರ್ಯನ ಹೊರಗಿನ ಪದರಗಳನ್ನು (ಕರೋನಾ) ವೀಕ್ಷಿಸಲು ಸಹಾಯಮಾಡುತ್ತವೆ. ಇವುಗಳಲ್ಲಿ ನಾಲ್ಕು ಪೇಲೋಡ್‌ಗಳು ವಿಶೇಷ ವಾಂಟೇಜ್ ಪಾಯಿಂಟ್ ಎಲ್ ೧ ಅನ್ನು ಬಳಸಿಕೊಂಡು, ನೇರವಾಗಿ ಸೂರ್ಯನನ್ನು ವೀಕ್ಷಿಸುತ್ತವೆ ಮತ್ತು ಉಳಿದ ಮೂರು ಪೇಲೋಡ್‌ಗಳು ಲ್ಯಾಗ್ರೇಂಜ್ ಪಾಯಿಂಟ್ ಎಲ್ ೧ ಸ್ಥಳದಲ್ಲಿ ಕಣಗಳು ಮತ್ತು ಕ್ಷೇತ್ರ ಸ್ಥಳದ ಅಧ್ಯಯನಗಳನ್ನು ನಡೆಸುತ್ತವೆ, ಹೀಗಾಗಿ ಇದು ಅಂತರಗ್ರಹ ಮಾಧ್ಯಮ (interplanetary medium) ದಲ್ಲಿ ಸೌರ ಡೈನಾಮಿಕ್ಸ್‌ (solar dynamics) ನ ಪ್ರಸರಣ (radiation) ಪರಿಣಾಮದ ಪ್ರಮುಖ ವೈಜ್ಞಾನಿಕ ಅಧ್ಯಯನಗಳನ್ನು ಒದಗಿಸುತ್ತದೆ ಎನ್ನಲಾಗಿದೆ. ಈ ಪೇಲೋಡ್ಗಳು ಕರೋನಲ್ ತಾಪನ (coronal temperature), ಸಾಮೂಹಿಕ ಹೊರಗಾಕುವಿಕೆ (ಮಾಸ್ ಎಜೆಕ್ಷನ್), ಪೂರ್ವ ಜ್ವಾಲೆ ಮತ್ತು ಸೌರ ಜ್ವಾಲೆ (solar flakes) ಯ ಚಟುವಟಿಕೆಗಳು , ಬಾಹ್ಯಾಕಾಶ ಹವಾಮಾನದ ಡೈನಾಮಿಕ್ಸ್, ಕಣ ಮತ್ತು ಕ್ಷೇತ್ರಗಳ ಪ್ರಸರಣ ಇತ್ಯಾದಿಗಳ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಲು ಅತ್ಯಂತ ನಿರ್ಣಾಯಕ ಮಾಹಿತಿಯನ್ನು ಒದಗಿಸುವ ನಿರೀಕ್ಷೆಯಿದೆ.

ಆದಿತ್ಯ ಎಲ್ ೧ ರ ಉದ್ದೇಶ ಗಳು ಈ ಕೆಳಗಿನವಾಗಿವೆ:

೧. ಸೌರ ಮೇಲಿನ ವಾತಾವರಣದ (ಕ್ರೋಮೋಸ್ಫಿಯರ್ ಮತ್ತು ಕರೋನಾ: chromosphere and corona) ಡೈನಾಮಿಕ್ಸ್ ಅಧ್ಯಯನ.

೨. ಕ್ರೋಮೋಸ್ಪಿರಿಕ್ ಮತ್ತು ಕರೋನಲ್ ಹೀಟಿಂಗ್, ಭಾಗಶಃ ಅಯಾನೀಕರಿಸಿದ ಪ್ಲಾಸ್ಮಾ (ionized plasma) ದ ಭೌತಶಾಸ್ತ್ರ, ಕರೋನಲ್ ಮಾಸ್ ಎಜೆಕ್ಷನ್‌ (coronal mass ejection) ಗಳ ಪ್ರಾರಂಭ ಮತ್ತು ಜ್ವಾಲೆಗಳ ಅಧ್ಯಯನ

೩. ಸೂರ್ಯನ ಕಣದ ಡೈನಾಮಿಕ್ಸ್ ನ ಅಧ್ಯಯನಕ್ಕಾಗಿ ಡೇಟಾವನ್ನು ಒದಗಿಸುವ ಇನ್-ಸಿಟು ಕಣ ಮತ್ತು ಪ್ಲಾಸ್ಮಾ ಪರಿಸರವನ್ನು ಗಮನಿಸಿ ಮಾಹಿತಿ ಕಳಿಸುವುದು.

೪. ಸೌರ ಕರೋನ (solar corona) ದ ಭೌತಶಾಸ್ತ್ರ ಮತ್ತು ಅದರ ತಾಪನ ಕಾರ್ಯವಿಧಾನ.

೫. ಕರೋನಲ್ ಮತ್ತು ಕರೋನಲ್ ಲೂಪ್ ಪ್ಲಾಸ್ಮಾ (coronal and coronal loops plasma) ದ ಪ್ರಯೋಗನಿರ್ಣಯ: ತಾಪಮಾನ, ವೇಗ ಮತ್ತು ಸಾಂದ್ರತೆ.

೬. ಕರೋನಲ್ ಮಾಸ್ ಇಜೆ ಕ್ಷನ್ (CME) ಗಳ ಅಭಿವೃದ್ಧಿ, ಡೈನಾಮಿಕ್ಸ್ ಮತ್ತು ಮೂಲ.

೭. ಬಹು ಪದರಗಳಲ್ಲಿ (ಕ್ರೋಮೋಸ್ಪಿಯರ್, ಬೇಸ್ ಮತ್ತು ವಿಸ್ತೃತ ಕರೋನಾ) ಸಂಭವಿಸುವ ಪ್ರಕ್ರಿಯೆಗಳ ಅನುಕ್ರಮವನ್ನು ಗುರುತಿಸುವಿಕೆ ಮತ್ತು ಅವುಗಳು ಅಂತಿಮವಾಗಿ ಸೌರ ಸ್ಫೋಟದ ಘಟನೆಗಳಿಗೆ ಕಾರಣವಾಗುವಿಕೆ.

೮. ಸೌರ ಕರೋನಾದಲ್ಲಿ ಮ್ಯಾಗ್ನೆಟಿಕ್ ಫೀಲ್ಡ್ ಟೋಪೋಲಜಿ ಮತ್ತು ಮ್ಯಾಗ್ನೆಟಿಕ್ ಫೀಲ್ಡ್ (Magnetic field topology and magnetic field) ಮಾಪನಗಳು.

೯. ಬಾಹ್ಯಾಕಾಶ ಹವಾಮಾನದ ಚಾಲನೆ ;ಸೌರ ಮಾರುತದ ಮೂಲ (space weather ), ಸಂಯೋಜನೆ ಮತ್ತು ಡೈನಾಮಿಕ್ಸ್ ನ ಅಧ್ಯಯನ.

ಆದಿತ್ಯ ಎಲ್ ೧ ಚಂದ್ರಯಾನ ೩ ಗಿಂತ ಕಡಿಮೆ ತೂಕವನ್ನು ಹೊಂದಿರುವುದರಿಂದ ಅದನ್ನು ನಮ್ಮ ಪೋಲಾರ್ ಉಪಗ್ರಹ ಉಡಾವಣಾ ವಾಹನ (PSLV-C57) ಉಡಾವಣಾ ವಾಹನ (launcher) ವನ್ನು ಬಳಸಿ ಉಡಾವಣೆ ಮಾಡಲಾಗುವುದು. ಕೆಳಗಿನ ಚಿತ್ರವು ಆದಿತ್ಯ ಎಲ್ ೧ ಪೇಲೋಡ್‌ಗಳನ್ನು ತೋರಿಸುತ್ತದೆ. ಇತರ ಮೂರು ಪೇಲೋಡ್‌ಗಳು ಹಿಂಭಾಗದಲ್ಲಿವೆ.

ಮೂಲ: ಇಸ್ರೋ (Source: ISRO)

ಚಂದ್ರಯಾನ ೩ ರ ಯಶಸ್ಸಿನ ಹೆಮ್ಮೆ ಉತ್ತುಂಗದಲ್ಲಿರುವಾಗಲೇ ಇನ್ನೂ ದೊಡ್ಡ ಗುರಿ ಸಾಧನೆಯ ಬೆನ್ನೇರಿ ಹೊರಟಿರುವ ಇಸ್ರೋವಿನ ಮಹತ್ವಾಕಾಂಕ್ಷೆ ನೆರವೇರಲಿ. ಭಾರತವು ಮತ್ತೊಂದು ಇತಿಹಾಸ ನಿರ್ಮಿಸಲಿ.

ಉಲ್ಲೇಖ: ಇಸ್ರೋ, ನಾಸಾ

ಮುಂದುವರೆದ ಕಡಿಮೆ ಶಕ್ತಿಯ ಕ್ರೋಡಿಕೃತ ಮಂಡಲಗಳ ವಿನ್ಯಾಸ ವಿಧಾನ (Advanced Low Power Integrated Circuit (IC) Design Method)

Figure source: einfochips

ಮನೆಗಳಲ್ಲಿ ವಿದ್ಯುತ್ ಶಕ್ತಿ ಉಳಿಸಲು ನಾವೇನೇನು ಮಾಡುತ್ತೇವೆ? ಮೊದಲನೆಯದಾಗಿ ಎಲ್ಲೆಲ್ಲಿ ವಿದ್ಯುತ್ ಬಳಸುತ್ತಿಲ್ಲವೋ, ಅಲ್ಲಲ್ಲಿ ವಿದ್ಯುತ್ ಕಡಿದು ಸ್ವಿಚ್ ಆಫ್ ಮಾಡುತ್ತೇವೆ. ಎರಡನೆಯದಾಗಿ ಮನೆಗಳಲ್ಲಿ ತಾಪನ ಜಾಲ (heating circuit) ಮತ್ತು ಬೆಳಕಿನ ಜಾಲ (lighting circuit) ಎಂಬ ಎರಡು ಪ್ರತ್ಯೇಕ ವಿದ್ಯುತ್ ಜಾಲಗಳಿರುತ್ತದೆ. ತಾಪನ ಜಾಲದಲ್ಲಿ ಎಲ್ಲ ಹೆಚ್ಚು ವಿದ್ಯುತ್ ಬಳಸುವ ಉಪಕರಣಗಳನ್ನು ಕಾರ್ಯಗತವಾಗಿರುತ್ತವೆ. ಇದರ ಉದಾಹರಣೆಗಳು ನೀರು ಕಾಯಿಸುವ ಉಪಕರಣ (water heaters), ಅಡಿಗೆ ಮನೆಯ ವಿದ್ಯುತ್ ಒಲೆ (Heating Oven) ಇತ್ಯಾದಿ. ಬೆಳಕಿನ ಜಾಲದಲ್ಲಿ ಟ್ಯೂಬ್ ಬೆಳಕು, ಫ್ಯಾನಗಳು ಇತ್ಯಾದಿ ಕೆಲಸ ಮಾಡುತ್ತವೆ. ತಾಪನ ಜಾಲವು ಹೆಚ್ಚು ವಿದ್ಯುತ್ ಬಳಸುತ್ತದೆ ಮತ್ತು ಬೆಳಕಿನ ಜಾಲವು ಕಡಿಮೆ ವಿದ್ಯುತ್ ಬಳಸುತ್ತದೆ. ಈ ತರಹ ಉಪಕರಣಗಳಿಗೆ ಅವುಗಳಿಗೆ ಬೇಕಾದಷ್ಟೇ ವಿದ್ಯುತ್ ಪೂರೈಸಲು ಸಾಧ್ಯವಾಗುತ್ತದೆ.
ಇದೆೇ ಪರಿಕಲ್ಪನೆಗಳನ್ನುಪಯೋಗಿಸಿ ಕಡಿಮೆ ಶಕ್ತಿಯ ಅರೆವಾಹಕ ವ್ಯವಸ್ಥೆ (Low power semiconductor systems on chip) ಗಳನ್ಮು ಚಿಪ್ನಲ್ಲಿ ವಿನ್ಯಾಸಮಾಡಲಾಗುತ್ತದೆ. ಕ್ರೋಡಿಕೃತ ಮಂಡಲ (ಐ ಸಿ) ಗಳಲ್ಲಿಯೂ ಬಹು ವಿದ್ಯುತ್ ಜಾಲಗಳ ತರ್ಕಾಂಶ ( Multi Voltage logic blocks) ಗಳಿರುತ್ತವೆ. ಕಡಿಮೆ ವಿದ್ಯುತ್ ಬಳಸುವಂತೆ ಮಾಡಲು ಕೆಲವು ತರ್ಕಾಂಶ (logic blocks) ಗಳನ್ನು ಅವುಗಳು ಕಾರ್ಯಮಾಡದೇ ಇದ್ದ ಪಕ್ಷದಲ್ಲಿ ಸ್ವಿಚ್ ಆಫ್ (Turned off) ಮಾಡಲಾಗುತ್ತದೆ. ಇದಕ್ಕಾಗಿ ವಿಶೇಷವಾದ ಶಕ್ತಿ ಒತ್ತು ಗುಂಡಿ ಕೋಶ (Power Switch) ಗಳನ್ನು ಬಳಸುತ್ತಾರೆ. ಅದಲ್ಲದೆ ಈ ಮಂಡಲಗಳಲ್ಲಿ ಸಂಪರ್ಕ ಸಂಕೇತಗಳು (signals cross from one block to the other) ಒಂದು ಶಕ್ತಿ ವಿನ್ಯಾಸಾಂಶದಿಂದ ಇನ್ನೊಂದು ಶಕ್ತಿಯ ವಿನ್ಯಾಸಾಂಶದಲ್ಲಿ ಬಳಸಲ್ಪಡುತ್ತವೆ. ಇವುಗಳ ಸರಿಯಾದ ಕಾರ್ಯನಿರ್ವಹಣೆಗೆ ಬೇರೆ ಬೇರೆ ಶಕ್ತಿವಲಯಕ್ಕೆ ಸೂಕ್ತ ವಾಗುವಂತೆ ಮಾಡುವ ಶಕ್ತಿವರ್ಧಕ ಕೋಶ (Level shifter cells) ಗಳನ್ನು ಬಳಸಲಾಗುತ್ತದೆ. ಬೇರೆ ಬೇರೆ ವಿದ್ಯುತ್ ಬಳಸಿ ಕೆಲಸಮಾಡುವ ವಿನ್ಯಾಸಾಂಶಗಳನ್ನು ಸೂಕ್ತವಾಗಿ ಬೇರ್ಪಡಿಸಲು, ವಿಶೇಷ ಐಸೋಲೇಷನ್ ಕೋಶ (Isolation cells) ಗಳು ಬೇಕಾಗುತ್ತವೆ. ಇವುಗಳನ್ನು ಉಪಯೋಗಿಸಿ ಕಡಿಮೆ ಶಕ್ತಿಯ ಮಂಡಲಗಳ ವಿನ್ಯಾಸದ ಪ್ರಕ್ರಿಯೆಯನ್ನು ಶಕ್ತಿ ನಿರ್ವಹಣೆ ( Power Management) ಎನ್ನುತ್ತಾರೆ. ಇದನ್ನು ಸಾದರ ಪಡಿಸಲು ತರ್ಕಗಳ ತಂತ್ರಜ್ಞಾನ ಆಲಯ (Logic technology library) ದಲ್ಲಿ ವಿಶೇಷವಾದ ಅಂಶಗಳಿರುತ್ತವೆ. ಅವುಗಳಾವುವೆಂದರೆ ಶಕ್ತಿ ಸ್ವಿಚ್ (Power Switch cells), ಮಟ್ಟಡ ವರ್ಗಾಯಿಸುವ ಕೋಶ (Level Shifter cells) , ಪ್ರತ್ಯೇಕ ತೆ ಕೊಡುವ ಕೋಶ. (Isolation cells) , ದಾರಣ ಅಥವಾ ಉಳಿಸಿಕೊಳ್ಳುವ ಕೋಶ (Retention cells) ಮತ್ತು ಯಾವಾಗಲೂ ಆನ್ (Always on ) ಆಗಿರುವಂತ ಕೋಶಗಳು.
ವಿನ್ಯಾಸದ ಶಕ್ತಿ ಬೇಡಿಕೆ (Power intent of the design) ಗಳನ್ನು ವಿನ್ಯಾಸಕಾರರು ವಿನ್ಯಾಸದ ನಿರ್ಬಂಧನೆ (constraint) ಯಾಗಿ ಸಾರ್ವತ್ರಿಕ ಶಕ್ತಿ : ಯೂ ಪಿ ಎಫ್ (UPF) ಸ್ವರೂಪದಲ್ಲಿ ಸಂಶ್ಲೇಷಣೆಯ ಸಾಧನ (Synthesis tools) ಗಳಿಗೆ ಒದಗಿಸಲಾಗುತ್ತದೆ. ಮಂಡಲಗಳ ವಿನ್ಯಾಸ ಕ್ರಮದಲ್ಲಿ ಈ ಅನುಷ್ಠಾನ ಸಾಧನಗಳು (Implementation tools) ಮೇಲೆ ಹೇಳಿದ ವಿಶೇಷ ಕೋಶಗಳನ್ನು ಬಳಸಿ ಮತ್ತು ಒದಗಿಸಿದ ಯೂ ಪಿ ಎಫ್ (UPF) ನಿರ್ಬಂಧದ ಪ್ರಕಾರ ವಿನ್ಯಾಸಗಳನ್ನು ಸಂಶ್ಲೇಷಿಸುತ್ತದೆ ಮತ್ತು ಅತ್ಯುತ್ತಮ (Synthesise and Optimize) ವಾಗಿಸುತ್ತವೆ. ಇದು ಸುಧಾರಿತ ಕಡಿಮೆ ಶಕ್ತಿಯ ಐಸಿ ವಿನ್ಯಾಸ (advanced low power IC design ) ವಿಧಾನದ ಸಂಕ್ಷಿಪ್ತ ವಿವರಣೆಯಾಗಿದೆ

ದೃಷ್ಟಿ ಮರೆಮಾಚಿಸುವ ತಂತ್ರಜ್ಞಾನ (optical camouflage technology)

ಮನುಷ್ಯನು ಅದ್ಭುತಗಳನ್ನು ಸೃಷ್ಠಿಸಲು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬಳಸುತ್ತಾ ಬಂದಿದ್ದಾನೆ. ಇಂತಹ ಒಂದು ಅದ್ಭುತ ಸೃಜನಾತ್ಮಕ ತಂತ್ರಜ್ಞಾನವೇ ದೃಷ್ಟಿ ಮರೆಮಾಚಿಸುವ ತಂತ್ರಜ್ಞಾನ (optical camouflage technology).
ಈ ತಂತ್ರಜ್ಞಾನ ಬಳಸಿ ನಾವು ಯಾವುದೇ ವಸ್ತು ಅಥವಾ ಜೀವಿಯನ್ನು ಕಾಣದಂತೆ ಮಾಡಬಹುದಾಗಿದೆ. ಇದರ ಉದಾಹರಣೆ ಯನ್ನು ನಾವೆಲ್ಲ ಮಿಸ್ಟರ್ ಇಂಡಿಯಾ (Mr. India) ಚಿತ್ರದಲ್ಲಿ ನೋಡಿ ಅನುಭವಿಸಿದ್ದೇವೆ. ಇದರಲ್ಲಿ ವರ್ಧಿತ ವಾಸ್ತವ (augmented reality) ಮತ್ತು ನ್ಯಾನೋ ತಂತ್ರಜ್ಞಾನ (Nanotechnology) ವನ್ನು ಬಳಸಲಾಗುತ್ತದೆ (ಮಿಸ್ಟರ್ ಇಂಡಿಯಾ ಚಲನಚಿತ್ರದಲ್ಲಿ ಈ ತಂತ್ರಜ್ಞಾನ ಬಳಕೆಯ ಸಾಧ್ಯತೆ ಅತೀಕಡಿಮೆ ಆದರೇ ಈ ತಂತ್ರಜ್ಞಾನದ ಸಾಧ್ಯತೆಯ ಅನುಭವ ಅಪ್ರತಿಮ) .
ವರ್ಧಿತ ವಾಸ್ತವ (augmented reality) ದ ವ್ಯವಸ್ಥ್ಯೆಗಳು ಕಂಪ್ಯೂಟರ್ ತಯಾರಿಸಿದ ಸಂದೇಶ ಗಳನ್ವು ಬಳಕೆಗಾರನ ಗ್ರಹಿಕೆ ಪರಿವರ್ತನೆ (change in user perception) ಮಾಡುವುದಕ್ಕೆ ಬಳಸಲಾಗುತ್ತದೆ. ವಾಸ್ತವದ ನೈಜತೆಯು (virtual reality) ಪರಿಸರವನ್ನು ಬದಲಾಯಿಸುವುದಾದರೆ, ವರ್ಧಿತ ವಾಸ್ತವವು ಪರಿಸರಕ್ಕೆ ಪೂರಕವಾದ ಸಹಾಯಕ ವಿಷಯಗಳನ್ನು ಅಳವಡಿಸಿ ಅದನ್ನು ಬಳಕೆದಾರನಿಗೆ ಪೂರಕವಾಗಿ ಒದಗಿಸುತ್ತದೆ. ಈ ಸಂಶ್ಲೇಷಿತ ಪರಿಸರ (processed environment) ವನ್ನು ವೀಕ್ಷಿಸಲು ಬಳಕೆದಾರರು ವಿಶೇಷವಾದ ಕನ್ನಡಕದಂತಹ ಉಪಕರಣವನ್ನು ಬಳಸಬೇಕಾಗುತ್ತದೆ. ಇದನ್ನು ದೃಷ್ಟಿ ಮರೆಮಾಚಿಸುವ ತಂತ್ರಜ್ಞಾನವೆನ್ನುತ್ತಾರೆ. ಇದರ ಒಂದು ಉದಾಹರಣೆಯು ಈ ಕೆಳಗಿದೆ.


ದೃಷ್ಟಿ ಮರೆಮಾಚಿಸುವ ತಂತ್ರಜ್ಞಾನಕ್ಕಾಗಿ ಹೆಚ್ಚು ಪ್ರತಿಪಲಿತ ಉಡುಪು (retro reflective cloak), ವೀಡಿಯೋ ಕ್ಯಾಮರಾ (video camera), ಪ್ರಕ್ಷೇಪಕ (projector), ಗಣಕಯಂತ್ರ (Computer) ಮತ್ತು ಸಂಯೋಜಕ (Combiner) ವಿಶೇಷವಾದ ಅರೆ ಬೆಳ್ಳಿಯ ಕನ್ನಡಿ (Half silver coated mirror) ಬೇ ಕಾಗುತ್ತದೆ.


ರೆಟ್ರೋ ಪ್ರತಿಪಲಕ ವಸ್ತು (Retro reflective material)ವಿನಿಂದ ಮಾಡಿದ ಮೇಲಂಗಿ (cloak) ಯ ಮೇಲೆ ಸಾವಿರಾರು ಸಣ್ಣ ಸಣ್ಣ ಮಣಿಗಳನ್ನು (beads) ಅಳವಡಿಸಲಾಗುತ್ತದೆ. ಬೆಳಕು ಅವುಗಳ ಮೇಲೆ ಬಿದ್ದೊಡನೆ ಬಂದ ದಿಕ್ಕಿನಲ್ಲೇ ಪ್ರತಿಪಲಿಸುತ್ತದೆ (reflect). ಈ ಪ್ರತಿಪಲನವು (reflection) ಕನ್ನಡಿಯ ಮತ್ತು ಅಪಾರದರ್ಶಕ ಪ್ರತಿಪಲನದಿಂದ (reflection from opaque or rough surface) ವಿಭಿನ್ನವಾಗಿದೆ. ಅಪಾರದರ್ಶಕ ವಸ್ತುವಿನ ಪ್ರತಿಪಲನವು ಬೆಳಕನ್ನು ಚದರಿಸಿ (scatter) ಹರಡಿದ ಪ್ರತಿಪಲನಮಾಡುತ್ತದೆ ಮತ್ತು ಕನ್ನಡಿಯ ಪ್ರತಿಪಲಿತ ಕಿರಣದ ಕೋನವು(angle of reflection ) ಘಟನೆಯ ಕಿರಣದ ಕೋನ (angle of incident) ವು ಕನ್ನಡಿಯ ಮೇಲ್ಮೈಗೆ ಸಮಪ್ರಮಾಣದಲ್ಲಿರುತ್ತದೆ.
ಇವುಗಳಿಗೆ ಹೋಲಿಸಿದರೆ ರೆಟ್ರೋ ಕಿರಣಗಳು ಬಂದ ದಿಕ್ಕಿಗೇ ಪ್ರತಿಪಲನಗೊಳ್ಳುತ್ತವೆ. ಇದರಲ್ಲಿ ಗಾಜಿನ ಮಣಿಗಳು ಅಶ್ರಗಗಳಂತೆ (prism) ಕೆಲಸಮಾಡಿ ಕಿರಣಗಳನ್ನು ವಕ್ರೀಕರಿಸಿ (refract) ಬಂದ ದಿಕ್ಕಿನಲ್ಲೇ ಬೆಳಕನ್ನು ಪುನಃ ಕಳಿಸುತ್ತದೆ. ಇದರಿಂದ ಬೆಳಕಿನ ಮೂಲದಲ್ಲಿರುವ ವೀಕ್ಷಕರಿಗೆ ಪ್ರತಿಪಲಿತ ಕಿರಣಗಳು ಮೂಲವಾಗಿ ಕಳಿಸಿದ ಕಿರಣಗಳಿಗಿಂತ ಜಾಸ್ತಿ ಪ್ರಕಾಶಮಾನವಾಗಿ ಕಾಣುತ್ತದೆ. ಈ ತರಹದ ರೆಟ್ರೋ ವಸ್ತುಗಳು ಸರ್ವೇ ಸಾಮಾನ್ಯ. ಇದಕ್ಕೆ ಉದಾಹರಣೆಗಳು ಸಂಚಾರ ಸಂಕೇತಗಳು (traffic signs), ರಸ್ತೆ ಗುರುತುಗಳು (road markers), ದ್ವಿಚಕ್ರವಾಹನದ ಪ್ರತಿಪಲಕ (bicycle reflectors) ಗಳಾಗಿವೆ. ನವೀನ ಕಾಲದ ಚಲನಚಿತ್ರದ ಪರದೆಗಳು (modem age cinema screens) ಕೂಡ ರೆಟ್ರೋ ವಸ್ತುಗಳೇ. ದೃಷ್ಟಿ ಮರೆಮಾಚಿಸುವ ತಂತ್ರಜ್ಞಾನದಲ್ಲಿ ಈ ವಸ್ತುಗಳ ಪಾತ್ರ ಬಹು ದೊಡ್ಡದು.
ವೀಡಿಯೋ ಕ್ಯಾಮರಾ (Video Camera)
ರೆಟ್ರೋ ವಸ್ತುವು ಪರಿಗಣನೆಯ ವಿಷಯವನ್ನು(Subject under considerations) ಅಗೋಚರ ಮಾಡುವುದಿಲ್ಲ. ಇದಕ್ಕಾಗಿಯೇ ವೀಡಿಯೋ ಕ್ಯಾಮರಾ ಹಿಂಬದಿಯ ದೃಶ್ಯವನ್ನು ಸೆರೆಹಿಡಿದು ರೆಟ್ರೋ ಪರದೆಯ ಮೇಲೆ ಪ್ರಕ್ಷೇಪ (project) ಮಾಡಬೇಕಾಗುತ್ತದೆ. ಹೀಗೆ ಸೆರೆ ಹಿಡಿದ ಹಿಂಬದಿಯ ಚಿತ್ರವನ್ನು ಕಂಪ್ಯೂಟರನಲ್ಲಿ ಪ್ರಕ್ರಿಯಿಸಿ ಅದನ್ನು ರೆಟ್ರೋ ಮೇಲಂಗಿ (retro reflective cloak) ಯ ಪರದೆಯ ಮೇಲೆ ಪ್ರೋಜೆಕ್ಟ ಮಾಡಲಾಗುತ್ತದೆ. ಈ ತರಹದ ಪ್ರಕ್ರಿಯೆಯನ್ನು ಚಿತ್ರ ಸಲ್ಲಿಕೆೆ (image rendering) ಯೆನ್ನುತ್ತಾರೆ.
ಚಿತ್ರ ಪ್ರೊಜೆಕ್ಟರ್ (Image Projector)
ಕಂಪ್ಯೂಟರನಲ್ಲಿ ಸಂಸ್ಕರಿಸಿದ ವಾಸ್ತವಿಕ ಚಿತ್ರವನ್ನು ರೆಟ್ರೋ ಉಡುಪಿನ ಮೇಲೆ ಮಸೂರ ಪೊರೆಯ ಡಯಾಫ್ರಾಮ್ ಮೂಲಕ ಪ್ರೋಜೆಕ್ಟ ಮಾಡುತ್ತದೆ. ಈ ಡಯಾಫ್ರಾಮ್ ಸಣ್ಣರಂದ್ರದ್ದಾಗಿರುತ್ತದೆ. ಇದರಿಂದ ರೆಟ್ರೊ ಪರದೆ ಅಥವಾ ಉಡುಪು ಪ್ರೋಜೆಕ್ಟರ ಮುಂದೆ ಎಷ್ಟೇ ದೂರದಲ್ಲಿ ಯೂ ಇಡಬಹುದಾಗಿದೆ.
ಸಂಯೋಜಕ (Combiner)
ಸಂಯೋಜಕವು ಕಿರಣವನ್ನು ಛೇದಿಸುವ (beam splitting) ಮತ್ತು ಸಂಯೋಜಕ (Combining) ಕೆಲಸವನ್ನು ಮಾಡುತ್ತದೆ. ಇದಕ್ಕಾಗಿ ವಿಶೇಷವಾದ ಅರ್ಧ ಬೆಳ್ಳಿಲೇಪಿತ ಕನ್ನಡಿ (half silver coated mirror) ಬಳಸಲಾಗುತ್ತದೆ. ಇದು ಸಂಸ್ಕರಿಸಿದ ಚಿತ್ರವನ್ನು ರೆಟ್ರೋ ಉಡುಪಿನೆಡೆಗೆ ಮತ್ತು ವೀಕ್ಷಕನೆಡೆಗೆ ಕಳಿಸುತ್ತದೆ. ಅದಕ್ಕೇ ಅದನ್ನು ಅರ್ಧ ಪಾರದರ್ಶಕವಾಗಿಯೂ (half transparent) ಅರ್ಧ ಅಪಾರದರ್ಶಕ (half opaque) ವಾಗಿರುತ್ತದೆ. ಇದನ್ನು ಸರಿಯಾದ ಜಾಗದಲ್ಲಿರಿಸಿದರೆ, ವೀಕ್ಷಕನು ಕಂಪ್ಯೂಟರನಲ್ಲಿ ಸಂಸ್ಕರಿಸಿದ ಚಿತ್ರವನ್ನು ವಾಸ್ತವಸಮೇತ ಗ್ರಹಿಸಬಹುದಾಗಿದೆ (perceived processed real image). ಮರೆಮಾಚಿಸುವದಕ್ಕೆ ಸಂಸ್ಕರಿಸಿದ ಚಿತ್ರ ಮತ್ತು ಮರೆಮಾಚಿಸಲು ಗುರುತಿಸಿದ ವಸ್ತು ಗಳನ್ನು ಸರಿಯಾಗಿ ಸಂಯೋಜಿಸಬೇಕಾಗುತ್ತದೆ.ಇದನ್ನು ನೋಡಲು ವೀಕ್ಷಕನು ಇಣುಕು ರಂಧ್ರದಲ್ಲಿ (peep hole) ನೋಡಬೇಕು.
ಪೂರ್ತಿ ವ್ಯವಸ್ಥೆ (Complete System)
ವಸ್ತು ಅಥವಾ ವ್ಯಕ್ತಿ ಮರೆಮಾಚಿಸುವುದಕ್ಕೆ ಹಂತ ಹಂತವಾಗಿ ಬೇಕಾಗುವ ವಿಧಾನವನ್ನುಈ ಕೆಳಗೆ ವಿವರಿಸಲಾಗಿದೆ.
೧. ಮರೆಮಾಚಿಸ ಬೇಕಾದ ವಸ್ತು ಅಥವಾ ವ್ಯಕ್ತಿಯು ರೆಟ್ರೋವಸ್ತುವಿನ ಉಡುಪನ್ನು ( retro reflective cloak) ಧರಿಸ ಬೇಕಾಗುತ್ತದೆ.
೨. ವೀಡಿಯೋ ಕ್ಯಾಮರಾ ಮರೆಮಾಚಿಸುವ ಹಿಂದೆ ವಾಸ್ತವ ದೃಶ್ಯವನ್ನು ಸೆರೆಹಿಡಿಯುತ್ತದೆ
೩. ಪ್ರೋಜೆಕ್ಟರ್ (Projector) ಕಂಪ್ಯೂಟರ್ ಸಂಸ್ಕರಿಸಿದ ಚಿತ್ರವನ್ನು ಸ್ವೀಕರಿಸಿ ಸೂಜಿರಂಧ್ರದ (pin hole) ಮುಖೇನ ದೃಶ್ಯವನ್ನು ಹೊಳೆಯುವಂತೆ ಮಾಡುತ್ತದೆ.
೪. ಅಪಾರದರ್ಶಕ ಬೆಳ್ಳಿ ಲೇಪಿತ ಕನ್ನಡಿ (half silver coated mirror) ಯು ರೆಟ್ರೋ ಹೊದಿಕೆಯ ಮರೆಮಾಚಿಸುವ ವಸ್ತುವಿನೆಡೆಗೆ ಬೆಳಕನ್ನು ಪ್ರತಿಫಲಿಸುತ್ತದೆ.
೫. ರೆಟ್ರೊ ಹೊದಿಕೆಯ ವಸ್ತುವು ಪರದೆಯ ತರಹ ಕಾರ್ಯಮಾಡಿ ಬಂದ ಬೆಳಕನ್ನು ಮೂಲಸ್ಥಾನವಾದ ಕನ್ನಡಿಯೆಡೆಗೆ ಮತ್ತೆ ಪ್ರತಿಫಲಿಸುತ್ತದೆ.
೬. ಹೀಗೆ ಪ್ರತಿಫಲಿಸಿದ ಬೆಳಕು ಅರ್ಧ ಪಾರದರ್ಶಕ ಕನ್ನಡಿಯ ಮೂಲಕ ವೀಕ್ಷಕನಿಗೆ ಕಾಣುತ್ತದೆ. ಹೀಗೆ ಪ್ರತಿಫಲಿತ ಬೆಳಕಿನಲ್ಲಿ ಕಾಣುವ ಚಿತ್ರವು ಮರೆಮಾಚಿಸಲ್ಪಟ್ಟ ದೃಶ್ಯವಾಗಿರುತ್ತದೆ. ಅದಲ್ಲದೆ ವೀಕ್ಷಕನಿಗೆ ಇತರ ಕಡೆಯಿಂದ ಬೆಳಕು ಕಾಣಿಸುತ್ತಿರುತ್ತದೆ. ಇದರಿಂದಲೇ ವೀಕ್ಷಕನಿಗೆ ಮರೆಮಾಚಿಸಿದ ವಸ್ತು ಅಥವಾ ವ್ಯಕ್ತಿಯನ್ನು ಬಿಟ್ಟು ಎಲ್ಲವೂ ನೈಸರ್ಗಿಕವಾಗಿ ಗ್ರಹಿಕೆ ಯಾಗುತ್ತದೆ.
ಈ ತಂತ್ರಜ್ಞಾನವನ್ನು ಅನೇಕ ಕ್ಷೇತ್ರಗಳಲ್ಲಿ ಬಳಸಬಹುದಾಗಿದೆ. ಕೆಲವು ಮುಖ್ಯವಾಗಿ ಬಳಸಬಹುದಾದ ಉಧಾಹರಣೆಗಳು ವಿಮಾನದ ಮೇಲೇರುವಿಕೆ ಮತ್ತು ಇಳಿಸುವಿಕೆಯಲ್ಲಿ (Landing and take off of flights) ವಿಮಾನ ಚಾಲಕನಿಗೆ ಸಹಾಯಕವ್ಯವಸ್ಥ್ಯೆಯಲ್ಲಿ, ವೈದ್ಯರ ಶಸ್ತ್ರಚಿಕಿತ್ಸೆಯ (medical surgery) ಸಮಯದಲ್ಲಿ ಅವರ ಕೈಗಳಡಿಯ ನೋಟ ತೋರಿಸಲು, ಕಿಟಕಿ ರಹಿತ ಕಟ್ಟಡಗಳಕೋಣೆ (windowless rooms) ಯಲ್ಲಿ ಹೊರನೋಟ ನೋಡಲು, ಮತ್ತು ವಾಹನಗಳ ಹಿನ್ನೋಟ ( rear view of vehicles) ವನ್ನು ಚಾಲಕರಿಗೆ ತೋರಿಸಲು ಬಳಸಿ ಬಳಕೆದಾರರಿಗೆ ಉನ್ನತ ಅನುಭವ ಕೊಡಲು ಬಳಸಬಹುದಾಗಿದೆ.

Design a site like this with WordPress.com
Get started